ಇತಿಹಾಸ ಬದಲಿಸಿ ಅವಧಿಗೆ ಮುಂಚೆ ವಿಸರ್ಜನೆಗೊಂಡ ಮಾಡಳು ಗೌರಮ್ಮ
ಮಾಡಾಳು ಸ್ವರ್ಣಗೌರಿ ಹಾಸನಜಿಲ್ಲೆ ಅರಸೀಕೆರೆ ತಾಲೂಕು ಮಾಡಾಳು ಗ್ರಾಮ ವರ್ಷಕ್ಕೊಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ, ಗೌರಮ್ಮನವರು ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ಒಂದು ಕಳಸದಲ್ಲಿ ಆ ನೀರನ್ನು ತಂದು ಮುದ್ದೆಗೌಡರ ಮನೆಯ ಬಾವಿಯಲ್ಲಿ ಹಾಕಿದರು ಅಂದೇ ತಾಯಿ ಸ್ವರ್ಣಗೌರಿ ಇಲ್ಲಿ ನೆಲೆನಿಂತಳು ಎಂಬ ಇತಿಹಾಸವಿದೆ ಸ್ವರ್ಣಗೌರಿಯನ್ನು ಅರಿಶಿಣ ಮತ್ತು ಮೃತ್ಯುಕೆ ಎಂಬ ಪವಿತ್ರ ಮಣ್ಣಿನಿಂದ ತಯಾರಿಸಲಾಗುತ್ತದೆ, ಗೌರಿಯನ್ನು ಹೀಗೆ ತಯಾರಿಸಬೇಕು ಎಂದು ಶಿವಲಿಂಗ ಸ್ವಾಮಿಗಳು ನೀಡಿದ ಗುರುತಿನ ದಾರವಿದೆ ಅದರ ಪದ್ದತಿಯಂತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮೂರ್ತಿ ನಿಲ್ಲುವುದಿಲ್ಲ, ಮೂರ್ತಿ ಕಾರ್ಯ ಪೂರ್ಣಗೊಂಡ ನಂತರ ದೇವಿಗೆ #ವಜ್ರದ_ಮೂಗುತಿಯನ್ನು ಕೋಡಿಮಠದ ಈಗಿನ ಪೀಠಾಧ್ಯಕ್ಷರು ಧರಿಸುತ್ತಾರೆ ಆ ಮೂಗೂತಿ ಧರಿಸಿದ ಮೇಲೆ ಅಮ್ಮನಿಗೆ ಜೀವಕಳೆ ಬರುತ್ತದೆ, ಇದಾದ ನಂತರ ಗೌರಿಹಬ್ಬದಂದು ಗ್ರಾಮದ ಬಸವಣ್ಣನ ಗುಡಿಯಲ್ಲಿ ಒಂಬತ್ತು ದಿನಗಳ ಕಾಲ ತ್ರಿಕಾಲ ಪೂಜೆಯೊಂದಿಗೆ ಆರಾಧಿಸುತ್ತಾರೆ ದೇವಿಗೆ ಒಡವೆ ವಸ್ತ್ರ ಬಂಗಾರಕ್ಕಿಂತ ಹೆಚ್ಚು ಪ್ರೀತಿ #ಕರ...