ಇತಿಹಾಸ ಬದಲಿಸಿ ಅವಧಿಗೆ ಮುಂಚೆ ವಿಸರ್ಜನೆಗೊಂಡ ಮಾಡಳು ಗೌರಮ್ಮ
ಮಾಡಾಳು ಸ್ವರ್ಣಗೌರಿ
ಹಾಸನಜಿಲ್ಲೆ ಅರಸೀಕೆರೆ ತಾಲೂಕು ಮಾಡಾಳು ಗ್ರಾಮ ವರ್ಷಕ್ಕೊಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ, ಗೌರಮ್ಮನವರು ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ಒಂದು ಕಳಸದಲ್ಲಿ ಆ ನೀರನ್ನು ತಂದು ಮುದ್ದೆಗೌಡರ ಮನೆಯ ಬಾವಿಯಲ್ಲಿ ಹಾಕಿದರು ಅಂದೇ ತಾಯಿ ಸ್ವರ್ಣಗೌರಿ ಇಲ್ಲಿ ನೆಲೆನಿಂತಳು ಎಂಬ ಇತಿಹಾಸವಿದೆ
ಸ್ವರ್ಣಗೌರಿಯನ್ನು ಅರಿಶಿಣ ಮತ್ತು ಮೃತ್ಯುಕೆ ಎಂಬ ಪವಿತ್ರ ಮಣ್ಣಿನಿಂದ ತಯಾರಿಸಲಾಗುತ್ತದೆ, ಗೌರಿಯನ್ನು ಹೀಗೆ ತಯಾರಿಸಬೇಕು ಎಂದು ಶಿವಲಿಂಗ ಸ್ವಾಮಿಗಳು ನೀಡಿದ ಗುರುತಿನ ದಾರವಿದೆ ಅದರ ಪದ್ದತಿಯಂತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮೂರ್ತಿ ನಿಲ್ಲುವುದಿಲ್ಲ, ಮೂರ್ತಿ ಕಾರ್ಯ ಪೂರ್ಣಗೊಂಡ ನಂತರ ದೇವಿಗೆ #ವಜ್ರದ_ಮೂಗುತಿಯನ್ನು ಕೋಡಿಮಠದ ಈಗಿನ ಪೀಠಾಧ್ಯಕ್ಷರು
ಧರಿಸುತ್ತಾರೆ ಆ ಮೂಗೂತಿ ಧರಿಸಿದ ಮೇಲೆ ಅಮ್ಮನಿಗೆ ಜೀವಕಳೆ ಬರುತ್ತದೆ, ಇದಾದ ನಂತರ ಗೌರಿಹಬ್ಬದಂದು ಗ್ರಾಮದ ಬಸವಣ್ಣನ ಗುಡಿಯಲ್ಲಿ ಒಂಬತ್ತು ದಿನಗಳ ಕಾಲ ತ್ರಿಕಾಲ ಪೂಜೆಯೊಂದಿಗೆ ಆರಾಧಿಸುತ್ತಾರೆ ದೇವಿಗೆ ಒಡವೆ ವಸ್ತ್ರ ಬಂಗಾರಕ್ಕಿಂತ ಹೆಚ್ಚು ಪ್ರೀತಿ #ಕರ್ಪೂರ, ಹೀಗಾಗಿ ಭಕ್ತರು ತಮ್ಮ ಶಕ್ತ್ಯಾನುಸಾರ ಹೆಚ್ಚಿನ ಕರ್ಪೂರ ಸುಡುತ್ತಾರೆ, ಅಮ್ಮನ ಗುಡಿಯ ಮುಂದಿನ ಕರ್ಪೂರದಗುಂಡಿ ಒಂಬತ್ತು ದಿನಗಳ ಕಾಲ ಆರೋದಿಲ್ಲ, ಇದಲ್ಲದೆ ಕೆಲವರು ಮಡಿಲಕ್ಕಿ ಸೀರೆ ಮಂಗಳ ದ್ರವ್ಯ ಅರ್ಪಿಸುತ್ತಾರೆ.
ಹೀಗೆ ಒಂಬತ್ತು ದಿನ ಕೈಲಾಸವನ್ನೆ ಧರೆಗಿಳಿಸುವ ಗೌರಮ್ಮ ಕೊನೆಯ ದಿನ ಊರಿನ ಎಲ್ಲಾ ಮನೆಗಳಿಂದ ಅರಿಶಿನ ಕುಂಕುಮ ಪಡೆದು ಊರಿನ ಕಲ್ಯಾಣಿ ಯಲ್ಲಿ ವಿಸರ್ಜನೆಗೊಳ್ಳುತ್ತಾಳೆ ಆದರೆ ಈ ವರ್ಷ ಗ್ರಾಮಸ್ಥರು ಮತ್ತು ದೇವಾಲಯ ಕಮಿಟಿಯವರ ಮಧ್ಯೆ ಅಸಮಾಧಾನವಿದ್ದು ದೇವಾಲಯ ವಿಚಾರ ನ್ಯಾಯಲದ ಮೆಟ್ಟಿಲೇರಿ ಕಮಿಟಿಯವರು ಸೇರಿ ವಂಶಪಾರಂಪರ್ಯವಾಗಿ ಬಂದ ಗೌರಮ್ಮನನ್ನು ಪ್ರತಿಷ್ಠಾಪಿಸಿ ಆ ದಿನವೇ ವಿಸರ್ಜಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಚಿಕ್ಕ ಗೌರಮ್ಮವೆಂದು ಮತ್ತೊಂದು ಗೌರಮ್ಮನನ್ನು ಪ್ರತಿಷ್ಠಾಪಿಸಿದ್ದಾರೆ.
ಗೌರಿ ಹಬ್ಬದಂದು ಮಾಡಾಳು ಗೌರಮ್ಮನವರಿಗೆ ಪ್ರತಿ ವರ್ಷದಂತೆ ಮೂಗುತಿ ಧರಿಸಲು ಬಂದ ಕೋಡಿಮಠದ ಕಿರಿಯ ಶ್ರೀಗಳಾದ ಚೇತನ ಮರೀದೇವರು ರವರನ್ನು ಗ್ರಾಮಸ್ಥರು ಉರಿನೊಳಗಡೆ ಬಿಡದೇ ರಸ್ತೆಯಲ್ಲೇ ತಡೆದು ದಿಕ್ಕಾರ ಕೂಗಿದ್ದಾರೆ.
ಕಿರಿಯ ಶ್ರೀಗಳು ಗ್ರಾಮಪ್ರವೇಶ ಮಾಡದೇ ಗ್ರಾಮಸ್ಥರು ಪ್ರತಿಷ್ಟಾಪನೆ ಮಾಡಿದ್ದ ಗೌರಮ್ಮ ನವರಿಗೆ ಮೂಗುತಿ ಧರಿಸಿ ವಾಪಾಸ್ ಹೋಗಿದ್ದಾರೆ.
ಗ್ರಾಮಸ್ಥರು ಪ್ರತಿಷ್ಟಾಪನೆ ಮಾಡಿರುವ ಗೌರಮ್ಮ ನವರು ಒಂಬತ್ತು ದಿನಗಳ ಕಾಲ ಪೂಜೆಗೊಂಡು ನಂತರ ವಿಸರ್ಜನೆ ಮಾಡಲಾಗುತ್ತದೆ. ಏನೇ ಆದರೂ ಇತಿಹಾಸವನ್ನು ಬದಲಿಸಿ, ಒಂದೇ ಊರಿನಲ್ಲಿ ಎರಡೆರಡು ಗೌರಮ್ಮನನ್ನು ಪ್ರತಿಷ್ಠಾಪಿಸಿ ರಾಜ್ಯದ ಜನತೆಗೆ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ.
"ವಿನಾಶಕಾಲೇ ವಿಪರೀತ ಬುದ್ಧಿ"

Comments
Post a Comment