ಸವಾಲಿಗೆ ಬದ್ಧರಾಗಿ ನಡೆದ ಶಿವಲಿಂಗೇಗೌಡರು.
ಅರಸೀಕೆರೆ:ಬಿಜೆಪಿ ಮುಖಂಡ ಎನ್ ಆರ್ ಸಂತೋಷ್ ಅವರ ನೇತೃತ್ವದಲ್ಲಿ ನಡೆದಂತಹ ಶಾಸಕರ ವಿರುದ್ಧ ಪ್ರತಿಭಟನೆಯಲ್ಲಿ ಹಾಸನದಿಂದ ಆಗಮಿಸಿದ ಬಿಜೆಪಿ ಮುಖಂಡ ರವಿಕುಮಾರ್ ಸ್ಥಳೀಯ ಶಾಸಕ ಶಿವಲಿಂಗೇಗೌಡರ ವಿರುದ್ಧ ರಾಗಿ ಕಳ್ಳ ಎಂದು ಆರೋಪವನ್ನು ಮಾಡಿದ್ದು ಖಂಡಿಸಿ ಶಾಸಕ ಶಿವಲಿಂಗೇಗೌಡರು ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆ ಆರೋಪವನ್ನು ತಳ್ಳಿ ಹಾಕಿದ್ದು , ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು, ಆ ಆರೋಪ ನಿಜವಾಗಿದ್ದರೆ ಬಂದು ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಅವರ ಮೇಲೆ ಪ್ರಮಾಣ ಮಾಡಲಿ ಎಂದು ಕರೆದಿದ್ದು ಈ ದಿನ ಅರಸೀಕೆರೆಯಿಂದ ಶಾಸಕ ಶಿವಲಿಂಗೇಗೌಡರು ನೂರಾರು ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಂಗೆಗೌಡರು ಆ ಭಗವಂತನಲ್ಲಿ ನಾವು ಬೇಡಿಕೊಳ್ಳುತ್ತೇವೆ 15 ವರ್ಷಗಳಿಂದ ಯಾವುದೇ ಅಹಿತಕರ ಘಟನೆಗಳು ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರಲಿಲ್ಲ, ಇವತ್ತಿನ ದಿನ ಏನು ಪ್ರಾರಂಭವಾಗಿದೆ ಆ ಪ್ರಾರಂಭಕ್ಕೆ ಕಾರಣಕರ್ತರಿಗೆ ಆ ಭಗವಂತ ಒಳ್ಳೆ ಬುದ್ಧಿಯನ್ನು ಕೊಡಲಿ ಎಂದು ಹಾಗೂ ನನ್ನ ಮೇಲೆ ಮಾಡಿರುವ ಆರೋಪ ಅಸತ್ಯವೆಂದು ಪ್ರಮಾಣ ಮಾಡಿ ಬರುತ್ತೇವೆ. ಹಾಗೂ ರಾಗಿ ಕಳ್ಳತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಣೆ ಪ್ರಮಾಣ ಮಾಡಿದ ಮೇಲೆ ಬಿಡುಗಡೆ ಮಾಡುತ್ತವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರು ಬಿಡುಗಡೆ ಮಾಡಲಿ, ಅದಕ್ಕಾಗಿ ನಾವು ಧರ್ಮಸ್ಥಳಕ್ಕೆ ಹೋಗದೆ ಇದ್ದರೆ "ನಾವು ಬಿಡುಗಡೆ ಮಾಡುತ್ತಿದ್ದೆವು ಇವರು ಅದಕ್ಕಾಗಿ ಧರ್ಮಸ್ಥಳಕ್ಕೆ ಹೋಗಿಲ್ಲ" ಎಂದು ಮತ್ತೆ ಸುಳ್ಳು ಆಪಾದನೆ ಮಾಡುತ್ತಾರೆ.
ಅವರ ಹತ್ತಿರ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ದಾಖಲಾತಿಗಳನ್ನು ಬಿಡುಗಡೆ ಮಾಡದೇ ಹೋದರೆ ? ಕಾನೂನು ಹೋರಾಟ ಮಾಡುತ್ತೇವೆ . ಇಲ್ಲ ದೇಶವ್ಯಾಪಿ ಕ್ಷಮೆಯಾಚಿಸಿ ಇನ್ನೂ ಮುಂದೆ ಈ ರೀತಿ ಯಾವ ಆಧಾರ ರಹಿತ ಪೊಳ್ಳು ಮಾತುಗಳನ್ನು ಆಡುವುದಿಲ್ಲವೆಂದು ಕ್ಷಮೆಯಾಚಿಸಲಿ ಇಲ್ಲವಾದರೆ ನಾವು ನ್ಯಾಯಾಲದ ಮೊರೆ ಹೋಗುತ್ತೇವೆ ಎಂದು ಹೇಳಿದರು.

Comments
Post a Comment