Posts

Showing posts from November, 2022

"ಜಿಲ್ಲಾಧಿಕಾರಿಗಳ ನಡೆ - ಹಳ್ಳಿಯ ಕಡೆ " ಎಂಬ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಂದ ಚಾಲನೆ

Image
ಸರ್ಕಾರದ ಪ್ರತಿಯೊಂದು ಸವಲತ್ತುಗಳು ನೇರ ಅರ್ಹ ಫಲಾನುಭವಿಗಳಿಗೆ ತಲುಪುವ ಮತ್ತು ಸ್ಥಳಿಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನದ ಸರ್ಕಾರದ ಯೋಜನೆಯಾದ "ಜಿಲ್ಲಾಧಿಕಾರಿಗಳ ನಡೆ - ಹಳ್ಳಿಯ ಕಡೆ " ಎಂಬ ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಗಂಡಸಿ ಹೋಬಳಿ ಮುದುಡಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಉದ್ಘಾಟನೆ ಮಾಡಿದರು.  ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಸ್ಥಳಿಯವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾದ ನಾನು ಹಗಲಿರುಳು ಶ್ರಮಿಸುತ್ತಿದ್ದು ಅದರ ಫಲಾವಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಯೋಜನೆ, ಗ್ರಾಮದಲ್ಲಿ ಮತ್ತು ಸಂಪರ್ಕ ಹಳ್ಳಿಗಳಿಗೆ ರಸ್ತೆ ನಿರ್ಮಾಣ , ಸಮಯದಾಯ ಭವನ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲು ಹೋರಾಟ ನಡೆಸಲಾಗುತ್ತದೆ ಎಂದರು. ಪ್ರಾಸ್ತಾವಿಕ ವಾಗಿ ಮಾತನಾಡಿದ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ರವರು ಇದೊಂದು ಸರ್ಕಾರದ ಯೋಜನೆಯಾಗಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಪ್ರತಿ ಹೋಬಳಿಯ ಗ್ರಾ.ಪಂ ವಾರು ನಡೆಸಲಾಗುವುದು. ಸಾರ್ವಜನಿಕರು  ಏನಾದರೂ ಇಲಾಖೆಗಳಿಗೆ ಸಂಬಂದಿಸಿದಂತೆ ಅವಹಾಲುಗಳನ್ನು ಇಲ್ಲಿ ಸಲ್ಲಿಸಬಹುದು. ಸಾಧ್ಯವಾದಷ್ಟು ಇಲ್ಲೇ ಪರಿಹಾರ ಮಾಡಲಾಗುವುದು, ಇಲ್ಲದಿದ್ದರೆ ನಿಯಮಿತ ಕಾಲಮಿತಿಯೊಳಗೆ ಪರಿಹರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು. ಸಾಮಾಜಿಕ...

ಅರಸೀಕೆರೆ ನಗರಸಭಾ ಕಛೇರಿಯಲ್ಲಿ ತಹಶೀಲ್ದಾರ್ ಹುಟ್ಟುಹಬ್ಬ ಆಚರಣೆ-ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್. ಬಿ ನಂಜುಂಡಪ್ಪ ದೂರು

Image
  ಈ ಹಿಂದೆ ಅರಸೀಕೆರೆ ನಗರಸಭಾ ಆಯುಕ್ತರಾಗಿದ್ದ ಬಸವಾರಾಜು ಶಿಗ್ಗಾಂವಿ ಯವರು ವರ್ಗಾವಣೆ ಆದಾಗ ಅರಸೀಕೆರೆ ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್ ಅವರನ್ನ ನಗರಸಭ ಆಯುಕ್ತ ರಾಗಿ ಇನ್ಚಾರ್ಜ್ ಕೊಡಲಾಗಿತ್ತು,ಈ ಸಂಧರ್ಭದಲ್ಲಿ ಖಾಸಗಿ ಜೀವನದ ತಮ್ಮ ಹುಟ್ಟು ಹಬ್ಬವನ್ನು  ನಗರಸಭ ಕಛೇರಿಯಲ್ಲಿ ಆಚರಿಸಿದ್ದಾರೆ ಎಂಬ ವಿಚಾರ ಕೇಳಿಬಂದಿದ್ದು,ಇದೇ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಎಸ್.ಬಿ ನಂಜುಂಡಪ್ಪನವರು  ಜಿಲ್ಲಾಧಿಕಾರಿ, ಹಾಸನ ಇವರಿಗೆ ಅರಸೀಕೆರೆ ತಹಶಿಲ್ದಾರರ ಮೇಲೆ‌ ದೂರು ನೀಡಿದ್ದು,ಇದಕ್ಕೆ‌ ಸಂಬಂದಿಸಿದಂತೆ ಅಪರ‌ಜಿಲ್ಲಾಧಿಕಾರಿಗಳು ಇವರು, ಉಪವಿಭಾಗಾಧಿಕಾರಿ ಹಾಸನ ವಿಭಾಗ ಇವರಿಗೆ ದೂರಿನ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಪತ್ರದ ಮೂಲಕ ತಿಳಿಸಿದ್ದಾರೆ.

ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೈಯಲ್ಲಿ ಚಾಕು-ಚೂರಿ.

Image
ಅರಸೀಕೆರೆ ನಗರದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ದಿನ ದ್ವಿತೀಯ ಪಿಯುಸಿ(HEPS)ಯಲ್ಲಿ ವ್ಯಾಸಂಗ ಮಾಡುತ್ತಿರುವ ಮನೋಜ್ ಹಾಗೂ ತೇಜಸ್ ಎಂಬುವವರ ನಡುವೆ ಕಳೆದ ದಿನ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ  ಜಗಳ ನಡೆದಿದ್ದು ಈ ಸಂದರ್ಭದಲ್ಲಿ ತೇಜಸ್ ಎಂಬಾತ  ಮನೋಜ್ ಎಂಬ ವಿದ್ಯಾರ್ಥಿಗೆ  ಚಾಕಿವಿನಿಂದ ಆರು ಏಳು ಕಡೆ ಚುಚ್ಚಿರುತ್ತಾನೆ. ಗಾಯಗೊಂಡ ವಿದ್ಯಾರ್ಥಿಯನ್ನು  ತಕ್ಷಣ ಅದೇ ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ಹಾಗೂ ಅತಿಥಿ ಉಪನ್ಯಾಸಕರಾದ ಸಂತೋಷ್ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಗಾಯಗೊಂಡ ವಿದ್ಯಾರ್ಥಿಯನ್ನು  ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. #BBANEWS #ಇದು_ಪಕ್ಕ_ವಾಸ್ತವ

ನಾನು ಕೂಡ ಪ್ರಬಲ‌ ಆಕಾಂಕ್ಷಿ-ಜಿ ಮರಿಸ್ವಾಮಿ

Image
ಇಂದು ಅರಸೀಕೆರೆ ನಗರಕ್ಕೆ ಭೇಟಿ ಕೊಟ್ಟ ಜಿ ಮರಿಸ್ವಾಮಿಯವರು ನಾನು ಕೂಡ ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ‌ ಘಳಿಗೆಯಲ್ಲಿ ನಾನು ಕೂಡ ಸ್ಪರ್ಧಿಸಿ ಪರಾಜಿತಗೊಂಡು ಇಪ್ಪತ್ತಾರು ಸಾವಿರ ಮತ ಪಡೆದಿದ್ದೆ,ಅರಸೀಕೆರೆ ಮತದಾರರ ಸಂಪರ್ಕದಲ್ಲಿ ಈಗಲೂ‌ ಇದ್ದೇನೆ,ಕರೋನ ಕಷ್ಟ ಕಾಲದಲ್ಲಿ ನಾನು ಅರಸೀಕೆರೆ ಕ್ಷೇತ್ರದ ಬಡವರಿಗೆ ಆಹಾರ‌ ಕಿಟ್ ಕೊಡುವುದರ ಮೂಲಕ ನಾನು ಸೇವೆ ಮಾಡಿದ್ದೇನೆ,ಇಂದಿನಿಂದ ಜನರ‌ ಜೊತೆ ನಿಂತು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ,ಜನರ‌‌ ಮನಸ್ಸನ್ನ ಗೆಲ್ಲುವ ಪ್ರಯತ್ನ ಮಾಡುತ್ತೇನೆ,ಪಕ್ಷ ಸೂಚನೆ‌ ನೀಡಿದರೆ ಚುನಾವಣೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.