ನಾನು ಕೂಡ ಪ್ರಬಲ‌ ಆಕಾಂಕ್ಷಿ-ಜಿ ಮರಿಸ್ವಾಮಿ



ಇಂದು ಅರಸೀಕೆರೆ ನಗರಕ್ಕೆ ಭೇಟಿ ಕೊಟ್ಟ ಜಿ ಮರಿಸ್ವಾಮಿಯವರು ನಾನು ಕೂಡ ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ‌ ಘಳಿಗೆಯಲ್ಲಿ ನಾನು ಕೂಡ ಸ್ಪರ್ಧಿಸಿ ಪರಾಜಿತಗೊಂಡು ಇಪ್ಪತ್ತಾರು ಸಾವಿರ ಮತ ಪಡೆದಿದ್ದೆ,ಅರಸೀಕೆರೆ ಮತದಾರರ ಸಂಪರ್ಕದಲ್ಲಿ ಈಗಲೂ‌ ಇದ್ದೇನೆ,ಕರೋನ ಕಷ್ಟ ಕಾಲದಲ್ಲಿ ನಾನು ಅರಸೀಕೆರೆ ಕ್ಷೇತ್ರದ ಬಡವರಿಗೆ ಆಹಾರ‌ ಕಿಟ್ ಕೊಡುವುದರ ಮೂಲಕ ನಾನು ಸೇವೆ ಮಾಡಿದ್ದೇನೆ,ಇಂದಿನಿಂದ ಜನರ‌ ಜೊತೆ ನಿಂತು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ,ಜನರ‌‌ ಮನಸ್ಸನ್ನ ಗೆಲ್ಲುವ ಪ್ರಯತ್ನ ಮಾಡುತ್ತೇನೆ,ಪಕ್ಷ ಸೂಚನೆ‌ ನೀಡಿದರೆ ಚುನಾವಣೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

Comments