ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೈಯಲ್ಲಿ ಚಾಕು-ಚೂರಿ.


ಅರಸೀಕೆರೆ ನಗರದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ದಿನ ದ್ವಿತೀಯ ಪಿಯುಸಿ(HEPS)ಯಲ್ಲಿ ವ್ಯಾಸಂಗ ಮಾಡುತ್ತಿರುವ ಮನೋಜ್ ಹಾಗೂ ತೇಜಸ್ ಎಂಬುವವರ ನಡುವೆ ಕಳೆದ ದಿನ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ  ಜಗಳ ನಡೆದಿದ್ದು ಈ ಸಂದರ್ಭದಲ್ಲಿ ತೇಜಸ್ ಎಂಬಾತ  ಮನೋಜ್ ಎಂಬ ವಿದ್ಯಾರ್ಥಿಗೆ  ಚಾಕಿವಿನಿಂದ ಆರು ಏಳು ಕಡೆ ಚುಚ್ಚಿರುತ್ತಾನೆ. ಗಾಯಗೊಂಡ ವಿದ್ಯಾರ್ಥಿಯನ್ನು  ತಕ್ಷಣ ಅದೇ ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ಹಾಗೂ ಅತಿಥಿ ಉಪನ್ಯಾಸಕರಾದ ಸಂತೋಷ್ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಗಾಯಗೊಂಡ ವಿದ್ಯಾರ್ಥಿಯನ್ನು  ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.


#BBANEWS

#ಇದು_ಪಕ್ಕ_ವಾಸ್ತವ

Comments