ಅರಸೀಕೆರೆ ನಗರಸಭಾ ಕಛೇರಿಯಲ್ಲಿ ತಹಶೀಲ್ದಾರ್ ಹುಟ್ಟುಹಬ್ಬ ಆಚರಣೆ-ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್. ಬಿ ನಂಜುಂಡಪ್ಪ ದೂರು
ಈ ಹಿಂದೆ ಅರಸೀಕೆರೆ ನಗರಸಭಾ ಆಯುಕ್ತರಾಗಿದ್ದ ಬಸವಾರಾಜು ಶಿಗ್ಗಾಂವಿ ಯವರು ವರ್ಗಾವಣೆ ಆದಾಗ ಅರಸೀಕೆರೆ ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್ ಅವರನ್ನ ನಗರಸಭ ಆಯುಕ್ತ ರಾಗಿ ಇನ್ಚಾರ್ಜ್ ಕೊಡಲಾಗಿತ್ತು,ಈ ಸಂಧರ್ಭದಲ್ಲಿ ಖಾಸಗಿ ಜೀವನದ ತಮ್ಮ ಹುಟ್ಟು ಹಬ್ಬವನ್ನು ನಗರಸಭ ಕಛೇರಿಯಲ್ಲಿ ಆಚರಿಸಿದ್ದಾರೆ ಎಂಬ ವಿಚಾರ ಕೇಳಿಬಂದಿದ್ದು,ಇದೇ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಎಸ್.ಬಿ ನಂಜುಂಡಪ್ಪನವರು ಜಿಲ್ಲಾಧಿಕಾರಿ, ಹಾಸನ ಇವರಿಗೆ ಅರಸೀಕೆರೆ ತಹಶಿಲ್ದಾರರ ಮೇಲೆ ದೂರು ನೀಡಿದ್ದು,ಇದಕ್ಕೆ ಸಂಬಂದಿಸಿದಂತೆ ಅಪರಜಿಲ್ಲಾಧಿಕಾರಿಗಳು ಇವರು, ಉಪವಿಭಾಗಾಧಿಕಾರಿ ಹಾಸನ ವಿಭಾಗ ಇವರಿಗೆ ದೂರಿನ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಪತ್ರದ ಮೂಲಕ ತಿಳಿಸಿದ್ದಾರೆ.

Comments
Post a Comment