ದಿನ ಭವಿಷ್ಯ ಅಖಿಲೇಶ್ ಆಗಮವಾದಿ




ಓಂ ಶ್ರೀ ಗುರುಬ್ಯೋ ನಮಃ 

ವಾರ : ಗುರುವಾರ

ದಿನಾಂಕ :   20 : 10: 2022

ಸೂರ್ಯೋದಯ : ಬೆಳಿಗ್ಗೆ   06:16 AM

ಸೂರ್ಯಾಸ್ತ.    : ಸಂಜೆ  06:03 PM


 ರಾಹುಕಾಲ : 1:38 PM  to 3:06 PM

ಯಮಗಂಡ  06:16 AM to 07:45 AM


       ಪಂಚಾಂಗ ವಿಶೇಷ

ಗತಶಾಲೀ ಶಾಲಿವಾಹನ ಶಕೆ 1944 

ವರ್ತಮಾನೇನ ಶಾಲಿವಾಹನ ಶಕೆ 1945

 ಸಂವತ್ಸರ : ಶುಭಕೃತು ನಾಮ ಸಂವತ್ಸರ

 ಆಯನ : /ದಕ್ಷಿಣಾಯನ 

 ಋತು : ಶರದ್ ಋತು

 ಮಾಸ : ಆಶ್ವಾಯುಜ ಮಾಸ

ಪಕ್ಷ :   ಕೃಷ್ಣ ಪಕ್ಷ

ನಕ್ಷತ್ರ :  ಆಶ್ಲೇಷ

ತಿಥಿ : ದಶಮಿ

ಕರಣ : ವಿಷ್ಟಿ

ಯೋಗ : ಶುಭ


ದಿನ ಭವಿಷ್ಯ


ಮೇಷ ರಾಶಿ :-  ಆರ್ಥಿಕ ವ್ಯವಸ್ಥೆಯಿಂದ ಹಣಕಾಸಿನ ಸಮಸ್ಯೆಯಿಂದ ಕೆಲವು ಶಕೆಲಸಗಳು ಬಾಕಿ ಉಳಿಯಬಹುದು ಸಂಗಾತಿಯೊಂದಿಗೆ ಅನಾವಶ್ಯಕ ಮಾತಿನ ಚಕಮಕಿಯುಂಟಾಗಬಹುದು , ಈ ದಿನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಬಹುದು .



ವೃಷಭ ರಾಶಿ :-  ಹೂಡಿಕೆಯಲ್ಲಿ ಲಾಭ , ಸ್ನೇಹಿತರೊಂದಿಗೆ ತುಂಬಾ ಒಳ್ಳೆಯ ಕೆಲಸಗಳುಂಟಾಗಬಹುದು , ಜ್ಞಾನಾಭಿವೃದ್ದಿ ,  ವೈವಾಹಿಕ ಜೀವನದಲ್ಲಿ ನಿರೀಕ್ಷೆಗೂ ಮೀರಿ ಫಲ. 



ಮಿಥುನ ರಾಶಿ :-   ಈ ದಿನದ ಬೆಳಗಿನ ಸಮಯದಿಂದ ಸಂಜೆಯತನಕ ಸಾಹಿತ್ಯ ಸಂಗೀತ ಮನರಂಜನೆ ಇತ್ಯಾದಿಗಳಲ್ಲಿ ಒಲವು ಕೊಡಬಹುದು ತದನಂತರ ಹಠಾತ್ ಹಣಖರ್ಚು ಮನಸ್ಸಿಗೆ ಬೇಜಾರು ನೀಡುವ ಘಟನೆಗಳು ಕುಟುಂಬ ಅಥವಾ ಸಮಾಜದಲ್ಲಿ ನಡೆಯಬಹುದು .



ಕರ್ಕಾಟಕ :- ಈ ದಿನ ನೀವು ವಿಶ್ರಾಂತಿ ಪ್ರಾಮುಖ್ಯತೆ ನೀಡಿ ,ಬೆಲೆ ಬಾಳುವ ವಸ್ತು ಕಳೆದು ಕೊಳ್ಳಬಹುದು , ಬಾಲ್ಯದ ನೆನಪುಗಳುಂಟಾಗಬಹುದು ವಾದವಿವಾದಿಂದ ದೂರ ಇರಿ.



ಸಿಂಹ ರಾಶಿ :-  ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ನಿಮ್ಮ ತೂಕದ ಮೇಲೆ ಹಿಡಿತ ಹೊಂದಿರಿ. ಇಂದು ಮನೆಯ ಯಾವುದೇ ಎಲೆಕ್ಟ್ರಾನಿಕ್ ಸರಕುಗಳ ಕೆಟ್ಟು ಹೋಗುವ ಕಾರಣದಿಂದಾಗಿ ನಿಮ್ಮ ಹಣ ಖರ್ಚಾಗಬಹುದು. ಭೇಟಿ ನೀಡುವ ಅತಿಥಿಗಳು ನಿಮ್ಮ ಸಂಜೆಯನ್ನು ಆಕ್ರಮಿಸಿಕೊಳ್ಳಬಹುದು. ಇಂದು ಪ್ರೇಮ ಜೀವನದ ವಿವಾದಾತ್ಮಕವಾಗಿರಬಹುದು. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿರೋಧಕ್ಕೆ ವಿವೇಚನಾಯುಕ್ತರೂ ಮತ್ತು ಧೈರ್ಯಶಾಲಿಗಳೂ ಆಗಿರಿ. ಇಂದು ನಿಮ್ಮ ನಿಕಟ ಜನರು ನಿಮ್ಮ ಹತ್ತಿರ ಬರಲು ಪ್ರಯತ್ನಿಸುತ್ತಾರೆ ಆದರೆ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ನೀವು ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ. 




ಕನ್ಯಾ ರಾಶಿ :-    ಆಯಾಸಕರ ಪ್ರಯಾಣ ಉತ್ತಮ ಹಣಲಾಭ ಯಶಸ್ಸಿನ ವ್ಯಾಪಾರ ಕಂಡು ಕೊಳ್ಳಬಹುದು ನಿಮ್ಮ ತಾಳ್ಮೆ ಸಹನೆಯಿಂದ ಗುರಿತಲುಪುತೀರಿ ಇಂದು ವೈವಾಹಿಕ ಜೀವನ ಸುಂದರವಾಗಿರುತ್ತದೆ .



ತುಲಾ ರಾಶಿ :-  ಪೊಷಕರ ಸೇವಾ ಮರೆಯದಿರಿ ಇಂದು ನೀವು ಗೊತ್ತಿಲ್ಲದ ಮೂಲಗಳಿಂದ ಹಣಪಡೆಯಬಹುದು ಇದರಿಂದ ಆರ್ಥಿಕ ಸಮಸ್ಯೆ ದೂರಾಗುವ ಸಂಭವ ಹೆಚ್ಚು  ಮಾತುಗಳು ಕೆಲಸದಲ್ಲಿ ತಪ್ಪಬಹುದು ವಿಶ್ರಾಂತಿ ಅಗತ್ಯ ನಿಮಗಿರಬಹುದು .



ವೃಶ್ಚಿಕ ರಾಶಿ :- ಕೋಪ ನಿಮ್ಮನ್ನೆ ದಹಿಸಬಹುದು ಕೋಪವನ್ನು ಹಿಡಿತದಲ್ಲಿಡಿ ಇಷ್ಟ ಪಟ್ಟ ಕೆಲಸ ಮಾಡುವ ಅವಕಾಶ ಸಿಗಬಹುದು ವಿದ್ಯಾರ್ಥಿಗಳು ಮೊಬೈಲ್ ಟಿವಿ ಇಂತವುಗಳಿಂದ ದೂರವಿದ್ದಷ್ಟು ಒಳ್ಳೆಯದು ವೈವಾಹಿಕ ಜೀವನಕ್ಕೆ ಹೊಸ ವಿಚಾರದಿಂದ ಖುಷಿ .



ಧನಸ್ಸು ರಾಶಿ :  ಆರೋಗ್ಯದಲ್ಲಿ ಏರುಪೇರು ತಾತ್ಕಾಲಿಕ ಸಾಲಗಳನ್ನು ಕೊಡುವುದು  ನಿರ್ಲಕ್ಷಿಸಿ ಅನೇಕ ಉತ್ತಮ ಕೆಲಸವನ್ನು ನೀವಿಂದು ಮಾಡಬಹುದು ಸಾದಾರಣವಾಗಿ ನೀವು ಪ್ರಯಾಣ ಇಷ್ಟ ಪಡಬಹುದು.



ಮಕರ ರಾಶಿ :-  ಈ ದಿನ ನಿಮ್ಮಲ್ಲಿ  ಸಕಾರಾತ್ಮಕ ದೃಷ್ಟಿಕೋನ ಹೆಚ್ಚು ಇರುತ್ತದೆ ಉತ್ತಮ ಯೋಚನೆಗಳಿಂದ ಆರ್ಥಿಕ ಯಶಸ್ಸು ಗಳಿಸಬಹುದು ವೈವಾಹಿಕ ಜೀವನದಲ್ಲಿ ನೆಮ್ಮದಿ .



ಕುಂಭ ರಾಶಿ : - ಸಾಲಕೊಡುವುದರಿಂದ ನಿಮಗೆ ತೊಂದರೆ ಉಂಟಾಗುವ ಸಂಬವ ಇದೆ ,ತಡರಾತ್ರಿ ಕೆಲಸಮಾಡುವುದು ಒಳ್ಳೆಯದಲ್ಲ ಇತರರ ಲೋಪದೋಷಗಳನ್ನು ಹೇಳುವ ಹಿಯಾಳಿಸುವುದನ್ನು ತಪ್ಪಿಸಿ .



ಮೀನ ರಾಶಿ :-  ನಕಾರಾತ್ಮಕ ಭಾವನೆಗಳನ್ನು ತಪ್ಪಿಸಿ , ಸಮಸ್ಯೆಗಳಿಂದ ಹೊರಬರುವ ದಿನವಾಗಿದೆ ಹಣಗಳಿಕೆಮೂಲ ತಿಳಿದಿರುವುದರಿಂದ ಹಣಕಾಸಿನಲ್ಲಿ ವ್ಯಾಪಾರ ಧನಲಾಭವಾಗುವಂತದ್ದು ಮತ್ತು ಸಂಗಾತಿಯೊಂದಿಗಿನ ಪ್ರೀತಿ ಬೇರೂರಿರುವಂತಹ ಅನುಭವ ಉಂಟಾಗುತ್ತದೆ .



ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ, ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ

ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ 

ಅಖಿಲೇಶ್ ಆಗಮವಾದಿ

8095959631

Comments