ಶಾಸಕ ಕೆ.ಎಂ.ಶಿವಲಿಂಗೇಗೌಡರಿಂದ 40 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯಗೆ ಶಂಕುಸ್ಥಾಪನೆ.

 



26-09-2022 :- ಕಣಕಟ್ಟೆ ಹೋಬಳಿ ಚಿಕ್ಕಹಲ್ಕೂರು ಗೊಲ್ಲರಹಟ್ಟಿ ಗ್ರಾಮ ಪರಿಮಿಯಲ್ಲಿ ಸುಮಾರು40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರತಿ ಗೊಲ್ಲರಹಟ್ಟಿಗಳಿಗೆ ಸಂಪರ್ಕ ರಸ್ತೆ ಮತ್ತು ಗ್ರಾಮಗಳ ಪರಿಮಿತಿಯಲ್ಲಿ ಉತ್ತಮ ರಸ್ತೆ ಮತ್ತು ಚರಂಡಿ ನಿರ್ಮಿಸುವ ಉದ್ದೇಶದಿಂದ ಅನುದಾನ ನೀಡಲಾಗಿದ್ದು ಅದರಂತೆ ಕಾಮಗಾರಿ ನಿರ್ವಹಿಸಲಾಗುವುದು, ಇಂಜಿನಿಯರ್ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

 ಈ ಸಂದರ್ಭದಲ್ಲಿ ಮಾಜಿ ತಾ.ಪಂ ಉಪಾಧ್ಯಕ್ಷ ಮಹೇಶ್ವರಪ್ಪ, ಮಾಜಿ ತಾ.ಪಂ.ಅಧ್ಯಕ್ಷ ಶಿವಮೂರ್ತಿ ಮುಖಂಡರುಗಳಾದ  ಚಿಕ್ಕಹಲ್ಕೂರು ಜಯಣ್ಣ,  ಪಾಂಡುರಂಗಪ್ಪ, ಸಿದ್ದಪ್ಪ ಗೊಲ್ಲರಹಟ್ಟಿ ಮಲ್ಲೇಗೌಡ, ಆರ್.ಡಿ.ಪಿ.ಆರ್ ಇಂಜಿನಿಯರ್ ತೀರ್ಥಾನಾಯ್ಕ ಹಾಜರಿದ್ದರು

Comments